Afbeeldingen
BijdragenGeen afbeeldingen om te laten zien
Feedback
Feedback gevenNow new improve looking smart all so clean super caring
ಶ್ರೀ ಕ್ಷೇತ್ರ ಇಂಚಗೇರಿ ಮಠ ಭಾಗ 4 . ಶ್ರೀ ರಘುನಾಥಪ್ರಿಯ ಮಹಾರಾಜರು.ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಮಹಾರಾಜರರಿಗೆ ಶ್ರೀ ರಘುನಾಥಪ್ರಿಯ ಮಹಾರಾಜರು ಹಾಗೂ ಶ್ರೀ ಭಾವುಸಾಹೇಬ್ ಮಹಾರಾಜರು ಪ್ರಮುಖ ಶಿಷ್ಯಂದಿರು. ಶ್ರೀ ರಘುನಾಥಪ್ರಿಯ ಒಬ್ಬ ಮಂತ್ರವಾದಿ ಅಗಿದ್ದರು. ಆದರೆ ಅವರ ಯಾವ ವಿದ್ಯೆಗಳು ಶ್ರೀ ಗುರುಲಿಂಗ ಜಂಗಮ ಮಹಾರಾಜರ ಮುಂದೆ ನಡೆಯಲಿಲ್ಲ. ಆಗ ಅವರು ನೀನು ತೋರಿಸುವ ವಿದ್ಯೆ ತಂತ್ರಗಳು ಹೊಟ್ಟೆ ಹಸಿವು ನೀಗಿಸುವ ವಿದ್ಯೆಗಳಾಗಿವೆ ಎಂದು ರಘುನಾಥ ಪ್ರಿಯ ಮಹಾರಾಜರಿಗೆ ತಿಳಿಸಿಕೊಟ್ಟರು. ನಂತರ ನಿತ್ಯ ನೂತನವು ಸತ್ಯವಾದ ಭಗವಂತನ ನಿಜರೂಪದ ಬಗ್ಗೆ ಅರಿವು ನೀಡಿದರು, ಅಲ್ಲದೇ ನೀನೇ ಭಗವಂತನದ್ದಿಯ ಎಂದು ತಿಳಿಸಿದರು. ನೀನು ಧ್ಯಾನ ಮಾಡಿ ನಿನ್ನನ್ನು ನೀನು ಅರಿ ಅಂತ ಹೇಳಿ ಉಪದೇಶ ನೀಡಿದರು . ರಘುನಾಥ ಪ್ರಿಯ ಮಹಾರಾಜರು ಅದನ್ನು ಒಪ್ಪಿಕೊಂಡರು. ನಂತರ ಅವರು ತಮ್ಮ ದೇಹವನ್ನು ಜಮಖಂಡಿ ತಾಲ್ಲೂಕಿನ ಚಿಮ್ಮಡ ಗ್ರಾಮದಲ್ಲಿ ಬಿಟ್ಟರು. ಈಗಲೂ ಪ್ರತಿವರ್ಷವೂ ಅಲ್ಲಿ ದೀಪಾವಳಿ ಕಡೆ ಪಾಡ್ಯೆ ದಿವಸ ರಥೋತ್ಸವ ನಡೆದು ಆಧಾತ್ಮಸಪ್ತಾಹ ಜರುಗುತ್ತದೆ.ಶ್ರೀ ಸ.ಸ.ಭಾವೂಸಾಹೇಬ್ ಮಹಾರಾಜರುಮಾನವ ಕುಲಕೋಟಿ ಉದ್ದರಿಸಲು ಭೂಮಿಯ ಮೇಲೆ ಮಾನವರೂಪಿ ಪರಮಾತ್ಮನು ಅವತರಿಸುವನು. ಅವನೇ ಸದ್ಗುರು. ಈ ಭೂಮಿ ಉದ್ದರಿಸಲು ಇಂಚಗೇರಿ ಆಧ್ಯಾತ್ಮಸಂಪ್ರಾಯದ ಸದ್ಗುರು ಪರಂಪರೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಚಗೇರಿ ಎಂಬ ಪುಟ್ಟಗ್ರಾಮದಲ್ಲಿದೆ. ಈ ಗ್ರಾಮ ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿದೆ. ಈ ಗ್ರಾಮದಿಂದ 25 ಕಿ.ಮೀ ದೂರದಲ್ಲಿ ಮಹಾರಾಷ್ಟ್ರ ರಾಜ್ಯದ ಜತ್ತ ತಾಲ್ಲೂಕಿನ ಉಮದಿ ಗ್ರಾಮದಲ್ಲಿ 1834ರ ರಾಮನವಮಿಯಂದು ಸದ್ಗುರು ಸಮರ್ಥ ಬಾವುಸಾಹೇಬ್ ಮಹಾರಾಜರು ಜನಿಸಿದರು.ಶ್ರೀ ಸ.ಸ. ಭಾವೂಸಾಹೇಬ್ ಮಹಾರಾಜರು 30 ಹಳ್ಳಿ ಜಹಾಗಿರದಾರರಾಗಿದ್ದರು. ಉಮದಿ ದೇಶಪಾಂಡೆ ಮನೆತನದವರಾಗಿದ್ದ ಶ್ರೀ ಸ.ಸ. ಭಾವೂಸಾಹೇಬ್ ಮಹಾರಾಜರು ನಿಂಬರಗಿ ಶ್ರೀಗಳ ಗುರುಲಿಂಗ ಜಂಗಮ ಮಹಾರಾಜರ ನಿರ್ದೇಶನದಂತೆ ಶ್ರೀ ರಘುನಾಥಪ್ರಿಯ ಮಹಾರಾಜರಿಂದ ಜ್ಙಾನೋಪದೇಶ ಪಡೆದಿದ್ದರೆಂದು ಹೇಳಲಾಗುತ್ತದೆ. ನಿಂಬರಗಿ ಶ್ರೀಗಳು ಗುರುಲಿಂಗ ಜಂಗಮ ಮಹಾರಾಜರ ದೇಹಬಿಟ್ಟ ನಂತರ ಭಾವೂಸಾಹೇಬ್ ಮಹಾರಾಜರು ಆಧ್ಯಾತ್ಮಪ್ರಸಾರದ ಹೊಣೆ ಹೊತ್ತರು. ಸುಮಾರು 30ವರ್ಷಗಳ ಕಾಲ ಜ್ಞಾನಾಮೃತವನ್ನು ಜ್ಙಾನದಾಹಿಗಳಿಗೆ ಜಾತಿಭೇದವನ್ನು ಎಣಿಸದೆ ನೀಡಿದರು. ನಿಂಬರಗಿ ಶ್ರೀಗಳ ಗುರುಲಿಂಗ ಜಂಗಮ ಸಮಾಧಿ ಮೇಲೆ ಅಂದು ಜಮೀನು ಮಾಲೀಕರು ಬಂದು ಒಡ್ಡನ್ನು ಹಾಕಿದಾಗ ಸಮಾಧಿಯು ಮುಚ್ಚಿದಾಗ ಉಮದಿಯ ಶ್ರೀಗಳು ಭಾವೂಸಾಹೇಬ್ ಮಹಾರಾಜರು ಬಹಳ ನೊಂದುಕೊಂಡರು. ನಿಂಬರಗಿ ಶ್ರೀಗಳ ಅಸ್ಥಿಗಳನ್ನು ತೆಗೆದುಕೊಂಡು 1930 ರ ರಾಮನವಮಿ ದಿನ ಇಂಚಗೇರಿ ಗ್ರಾಮದಲ್ಲಿ ಶ್ರೀ ಅಣ್ಣರಾಯ ಕುಲಕರ್ಣಿರವರಿಂದ 30 ಗುಂಟೆ ಜಮೀನನ್ನು ಪಡೆದುಕೊಂಡ ನಂತರ ಅಲ್ಲಿ ಶ್ರೀ ಗುರುಲಿಂಗ ಜಂಗಮ ಮಹಾರಾಜರ ಅಸ್ಢಿ ಪ್ರತಿಷ್ಠಾಪನೆ ಮಾಡಿದರು.ಉಮದಿ ಶ್ರೀಗಳು ಬಾವೂಸಾಹೇಬ್ ಮಹಾರಾಜರು ವಿಜಯಪುರ ಜಿಲ್ಲೆ, ಬೆಳಗಾವಿ ಜಿಲ್ಲೆ, ಸಾಂಗ್ಲಿ ಜಿಲ್ಲೆ, ಪುಣೆ ಭಾಗದಲ್ಲಿ ಭಕ್ತಿ ಪ್ರಚಾರವನ್ನು ಮಾಡಿ ಭಕ್ತವೃಂದವನ್ನು ಬೆಳೆಸಿದರು. ಭಕ್ತಿ ಪ್ರಚಾರ ಕಾಲದಲ್ಲಿ ತಮ್ಮ ಎಲ್ಲಾ ಪ್ರವಾಸದ ಹಾಗೂ ಅವರು ಕೂಡ ಇದ್ದ ಶಿಷ್ಯ ವೃಂದದ ಖರ್ಚನ್ನು ಸಹ ಶ್ರೀ ಉಮದಿ ಶ್ರೀಗಳು ಭಾವೂಸಾಹೇಬ್ ಮಹಾರಾಜರು ವಹಿಸಿಕೊಳ್ಳುತ್ತಿದ್ದರು. ಅವರ ಶಿಷ್ಯರಲ್ಲಿ ಜಮಖಂಡಿಯ ಶ್ರೀ ಗಿರಿಮಲ್ಲೇಶ್ವರ ಮಹಾರಾಜರು, ಶ್ರೀ ಗುರುದೇವ ರಾನಡೆಯವರು, ಜಿಗಜೀವಣಿಯ ಅಂಬುರಾವ ಮಹರಾಜರು, ಸೋಲಾಪುರ ಸಿದ್ದರಾಮೇಶ್ವರ ಮಹಾರಾಜರು, ಕನ್ನೂರಿನ ಸಿದ್ದಲಿಂಗೇಶ್ವರ ಮಹಾರಾಜರು, ಬಾಗೇವಾಡಿಯ ನರಸಿಂಹೇಶ್ವರ ಮಹಾರಾಜರು, ಹೊರ್ತಿ ಶ್ರೀರಾಮರಾವ್ ಮಹಾರಾಜರು ಪ್ರಮುಖರು.ಅಗರ್ಭ ಶ್ರೀಮಂತರಾಗಿದ್ದು, ಜಮಖಂಡಿಯ ಶ್ರೀ ಗಿರಿಮಲ್ಲೇಶ್ವರರು ಉಮದಿ ಶ್ರೀಗಳ ಭಾವೂಸಾಹೇಬ್ ಮಹಾರಾಜರು ಇಚ್ಚೆಯಂತೆ ಅವರಿಗೆ ಅರಿಯದಂತೆ ಮಹಾರಾಜರು ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಶ್ರೀ ಗುರುಲಿಂಗ ಜಂಗಮ ಮಹಾರಾಜರ ಗದ್ದುಗೆಯ ಮೇಲೆ ಗರ್ಭಗುಡಿಯನ್ನು ನಿರ್ಮಿಸಿದರು. ಸಾಮಾನ್ಯವಾಗಿ ಇಂಚಗೇರಿ ಮಠದ ಖರ್ಚುವೆಚ್ಚಗಳನ್ನು ಶ್ರೀ ಗಿರಿಮಲ್ಲೇಶ್ವರರು ನೋಡಿಕೊಳ್ಳುತ್ತಿದ್ದರು. 1913 ರ ಮಾಘ ಶುದ್ದ ತೃತಿಯದಂದು ಶ್ರೀ ಭಾವುಸಾಹೇಬ್ ಮಹಾರಾಜರು ದೇಹಬಿಟ್ಟರು...... ಮುಂದೆವರಿಯುವದು
Chief menu, can be improved well, food quality is average..
Health care center
Cleanliness needed..